ಪ್ರ'ತಾಪ್ ಸಿಂ'ಹ ವಿ'ರುದ್ಧ ಗೆ'ದ್ದ ಪ್ರ'ಕಾಶ್ ರೈ - ಮಾ'ನಹಾನಿ ದಂ'ಡದಿಂದ ತ'ಪ್ಪಿಸಿ'ಕೊಂಡ ಪ್ರ'ತಾಪ್ ಸಿಂಹ !

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದ ಸಂದರ್ಭದಲ್ಲಿ ಪ್ರಕಾಶ್ ರೈ ಕೇಂದ್ರ ಸರ್ಕಾರ ಹಾಗೂ ಬಲಪಂಥೀಯ ಚಿಂತಕರ ವಿರುದ್ಧ ನಿರಂತರವಾಗಿ ಟೀಕಾಪ್ರಹಾರ ಮಾಡುತ್ತಲೇ ಇದ್ದರು. ಇದರಿಂದ ಕೋಪಗೊಂಡಿದ್ದ ಸಂಸದ ಪ್ರತಾಪ್ ಸಿಂಹ ನಟ ಪ್ರಕಾಶ್ ರೈ ಅವರನ್ನು ವ್ಯಯಕ್ತಿಕವಾಗಿ ನಿಂದಿಸಿ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು.

ಪ್ರಕಾಶ್ ರೈ ಹಾಗೂ ಅವರ ಕೌಟುಂಬಿಕ ವಿಚಾರದ ಬಗ್ಗೆ ಅವಹೇಳನಕಾರಿಯಾದ ಬರಹವನ್ನು ಪ್ರಕಟಿಸುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಕೊನೆಗೂ ಈ ಕುರಿತು ಇಂದು ಟ್ವೀಟರ್​ನಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

ಹೀಗಾಗಿ ಪ್ರಕಾಶ್ ರೈ 1 ರೂ. ಪರಿಹಾರ ಕೋರಿ ಪ್ರತಾಪ್ ಸಿಂಹ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ. ಇಂದು ಪ್ರತಾಪ್ ಸಿಂಹ ತಮ್ಮ ತಪ್ಪಿನ ಅರಿವಾಗಿ ಟ್ವಿಟರ್ ಮೂಲಕ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಎರಡು ವರ್ಷದ ವೈಮನಸ್ಯ ಹಾಗೂ ಸಾಮಾಜಿಕ ಜಾಲತಣದಲ್ಲಿನ ಜಿದ್ದಾಜಿದ್ಧಿ ಇಂದು ಕೊನೆಯಾಗಿದೆ.

ಟ್ವಿಟರ್​ನಲ್ಲಿ ನಟ ಪ್ರಕಾಶ್ ರೈ ಅವರ ಕ್ಷಮೆ ಕೋರಿರುವ ಪ್ರತಾಪ್ ಸಿಂಹ, “ಆತ್ಮೀಯ ಪ್ರಕಾಶ್ ರೈ ಅವರೆ, ನಿಮ್ಮ ಹಾಗೂ ನಿಮ್ಮ ಕುಟುಂಬದ ಮಾನ ಹಾಕಿಯಾಗುವಂತಹ ಬರಹವನ್ನು ನಾನು 2017 ಆಕ್ಟೋಬರ್ 2 ಮತ್ತು 3 ರಂದು ಬರೆದಿದ್ದೆ. ಆದರೆ, ಇದು ಅನಗತ್ಯ ಮತ್ತು ಮನಸ್ಸಿಗೆ ನೋವು ತರುವ ವಿಚಾರ ಎಂದು ಈಗ ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಈ ಟ್ವಿಟರ್ ಮತ್ತು ಎಫ್​ಬಿಯಲ್ಲಿ ಬರೆಯಲಾಗಿರುವ ಬರಹದ ಕುರಿತು ವಿಷಾಧಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, “ಧನ್ಯವಾದಗಳು ಪ್ರತಾಪ್ ಸಿಂಹ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ವ್ಯಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು.

ನಾವು ಇಬ್ಬರೂ ಅವರವರ ಕ್ಷೇತ್ರದಲ್ಲಿ ವ್ಯಯಕ್ತಿಕವಾಗಿ ಉನ್ನತ ಮಟ್ಟಕ್ಕೆ ಏರಿದ್ದೇವೆ. ಹೀಗಾಗಿ ನಾವು ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕರ್ತವ್ಯ, ನಿಮಗೆ ಶುಭವಾಗಲಿ” ಎಂದು ತಿಳಿಸಿದ್ದಾರೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?