ಮ'ಣ್ಣಿನ ಆ'ಸೆಯಿಂದ ಎ. ರಾ'ಮದಾಸ್ ಕ'ನಸು ಮ'ಣ್ಣಾಗುವುದೇ ? ಸಚಿವ ಸ್ಥಾ'ನ ಕನಸು ಭ'ಗ್ನ !

ಯಡಿಯೂರಪ್ಪನವರ ಮಂತ್ರಿಮಂಡಲದಲ್ಲಿ ಮೈಸೂರು ಭಾಗದಿಂದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ರಾಮದಾಸ್ ಅವರಿಗೆ ಇಷ್ಟು ದಿನ ಹೆಣ್ಣಿನ ಕಾಟವಿತ್ತು ಆದರೆ ಇನ್ನು ಮುಂದೆ ಮಣ್ಣಿನ ಕಾಟ ಶುರುವಾಗಿದೆ ಎಂದು ಹೇಳಲಾಗಿದೆ ಮತ್ತು ಈ ಪ್ರಕರಣದಿಂದ ಸಚಿವ ಸ್ಥಾನದ ಕನಸು ಭಗ್ನವಾಗಬಹುದೆಂಬ ಮಾತುಗಳು ಕೇಳಿಬರುತ್ತಿದೆ.

ಇನ್ನೆರಡು ದಿನಗಳಲ್ಲಿ ರಚನೆಯಾಗಲಿರುವ ಬಿಎಸ್​ವೈ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವ ಸ್ಥಾನ ಪಡೆದುಕೊಳ್ಳುವ ಕನಸಿನಲ್ಲಿದ್ದ ಮೈಸೂರಿನ ಬಿಜೆಪಿನ ಹಿರಿಯ ಶಾಸಕ ಎಸ್​.ಎ.ರಾಮದಾಸ ಕನಸು ಭಗ್ನಗೊಂಡಿದೆ. ರಾಮದಾಸ್ ವಿರುದ್ಧದ ಹಳೆಯ ಭೂಕಬಳಿಕೆಯ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದ್ದು, ಕ್ರಿಮಿನಲ್​ ಮೊಕದ್ದಮೆ ದಾಖಲಾಗಿ ಸಚಿವ ಸ್ಥಾನದ ಕನಸು ಕಸಿದುಕೊಂಡಿದೆ.

ಕಳೆದ ವರ್ಷ ರಾಮದಾಸ್ ಮತ್ತೆ ಶಾಸಕರಾಗಿ ಚುನಾಯಿತರಾಗಿದ್ದರಿಂದ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ರಾಮದಾಸ್​ ವಿರುದ್ಧ ಐಪಿಸಿ ಸೆಕ್ಷನ್​ 420, 468 ಅಡಿ ಕ್ರಿಮಿನಲ್​ ಕೇಸ್​ ದಾಖಲಿಸುವಂತೆ ಆದೇಶಿಸಿದೆ. ಅಲ್ಲದೆ ಸೆಪ್ಟೆಂಬರ್​ 3ಕ್ಕೆ ಕೋರ್ಟ್​ಗೆ ಖುದ್ದು ಹಾಜರಿಗೂ ಕೋರ್ಟ್​ ಸೂಚಿಸಿದೆ. ಈ ಪ್ರಕರಣದಿಂದಾಗಿ ಸಚಿವ ಸಂಪುಟ ಸೇರ್ಪಡೆಗಾಗಿ ಭಾರೀ ಕಸರತ್ತು ನಡೆಸಿರುವ ರಾಮದಾಸ್​ಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ಹೈ ಕಮಾಂಡ್ ಪ್ರಕಾರ ಕ್ರಿಮಿನಲ್ ಮೊಕದ್ದಮ್ಮೆ ಇಲ್ಲದವರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ ಎಂಬ ಸುದ್ದಿ.

1995ರಲ್ಲಿ ಮೈಸೂರು ಜಿಲ್ಲಾಧಿಕಾರಿ ತ.ಮ. ವಿಜಯಭಾಸ್ಕರ್​ ಭೂ ಹಗರಣಕ್ಕೆ ಸಂಬಂಧಿಸಿದಂತೆ ವರದಿ ನೀಡಿದ್ದರು. ಈ ವರದಿ ಪ್ರಕಾರ ಆಗ ಶಾಸಕರಾಗಿದ್ದ ರಾಮದಾಸ್ ನೂರಾರು ಎಕರೆ ಭೂಮಿಯನ್ನು ಪರಿವರ್ತನೆ ಮಾಡದೆ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ನಷ್ಟ ಹಾಗೂ ಭೂ ಸುಧಾರಣಾ ಕಾಯಿದೆ ಉಲ್ಲಂಘನೆ ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವರದಿ ಆಧರಿಸಿ 2008ರಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ವರದಿಯನ್ನು ಪುರಸ್ಕರಿಸಿದ್ದ ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್​ ರಾಮದಾಸ್​ ವಿರುದ್ಧ ಪ್ರಕರಣ ದಾಖಲಿಸುವಂತೆ ಅಶೋಕಪುರಂ ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಪ್ರಕರಣ ದಾಖಲಾಗಿತ್ತು. ಆಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎಸಿಪಿ ಮೇಲೆ ತಮ್ಮ ಪ್ರಭಾವ ಬಳಸಿ ಬಿ ರಿಪೋರ್ಟ್​ ಹಾಕಿಸಿದ್ದರು. ಬಿ ರಿಪೋರ್ಟ್​ ಪ್ರಶ್ನಿಸಿ ಮೈಸೂರಿನ ಕೋರ್ಟ್​ನಲ್ಲಿ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್​​ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. 1995ರಲ್ಲಿ ನಡೆದಿದ್ದ ಮಳಲವಾಡಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರಾಮದಾಸ್​ ವಿರುದ್ಧ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್​​ ರದ್ದುಗೊಳಿಸಿ ಕ್ರಿಮಿನಲ್​ ಕೇಸ್ ದಾಖಲಿಸಲು ಆದೇಶಿಸಿರುವುದು ರಾಮದಾಸ್ ಅವರಿಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ BTV ಯಲ್ಲಿ ವರದಿಯಾಗಿದೆ.

ಈ ಮೊದಲು ಒಬ್ಬ ಮಹಿಳೆ ರಾಮದಾಸ್ ಅವರ ಮೇಲೆ ಪ್ರಕರಣ ದಾಖಲಿಸಿದ್ದರು.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?