ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬಿದ್ದ ಪಾಕ್ - ತರಕಾರಿ ಬೆಲೆ ಎಷ್ಟಾಗಿದೆ ಗೊತ್ತಾ !

ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ್ದರಿಂದ ಪಾಕಿಸ್ತಾನ ಆಘಾತಕ್ಕೊಳಗಾಗಿದೆ. ಅದೇ ಕೋಪದಲ್ಲಿ ಅವರು ಭಾರತದೊಂದಿಗಿನ ವ್ಯವಹಾರ ಸಂಬಂಧವನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ಈ ನಿರ್ಧಾರ ಪಾಕಿಸ್ತಾನದಲ್ಲಿ ಭೀತಿ ಸೃಷ್ಟಿಸಿದೆ. ಭಾರತೀಯ ರೈತರು ಮತ್ತು ವ್ಯಾಪಾರಿಗಳು ತಮ್ಮ ಸರಕುಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲು ನಿರಾಕರಿಸಿದರು. ಅಲ್ಲದೆ, ಸರ್ಕಾರವು ಕಸ್ಟಮ್ ಸುಂಕವನ್ನು 200 ಪ್ರತಿಶತ ಹೆಚ್ಚಿಸಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಟೊಮ್ಯಾಟೋ ಬೆಲೆ ಪ್ರತಿ ಕಿಲೋಗ್ರಾಂಗೆ 300 ರುಪಾಯಿಗೆ ಏರಿದೆ.

ಭಾರತಕ್ಕೆ ಟಾಂಗ್ ಕೊಡಲು ವ್ಯವಹಾರ ಸಂಬಂಧವನ್ನು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ತಾನೇ ಮಾಡಿದ ತಪ್ಪಿಗೆ ತಾನೇ ಕಷ್ಟ ಅನುಭವಿಸುತ್ತಿದೆ. ಅವರಂದುಕೊಂಡಾಗೆ ಭಾರತಕ್ಕೆ ನಷ್ಟವಿಲ್ಲ , ನಿಜವಾಗಿ ನಷ್ಟವಾಗಿದ್ದು ಪಾಕಿಸ್ತಾನಕ್ಕೆ. ಪಾಕಿಸ್ತಾನದ ಈ ತಪ್ಪು ನಿರ್ಧಾರದಿಂದ ಅಲ್ಲಿನ ಜನಗಳು ಕಷ್ಟ ಅನುಭವಿಸುವಂತಾಗಿದೆ.

ಭಾರತದ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿರುವುದರಿಂದ ಪಾಕಿಸ್ತಾನದಲ್ಲಿ ಕೇವಲ ಟೊಮ್ಯಾಟೋ ಬೆಲೆ ಮಾತ್ರ ಗಗನಕ್ಕೇರಿಲ್ಲ. ಜೊತೆಗೆ ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಹೆಚ್ಚಿನ ಹಸಿರು ತರಕಾರಿಗಳು ಅಲ್ಲಿ ದುಬಾರಿಯಾಗಿದೆ. ಸಾಮಾನ್ಯವಾಗಿ, ತರಕಾರಿಗಳ ಬೆಲೆ ದ್ವಿಗುಣಗೊಂಡಿದೆ. ಪಾಕಿಸ್ತಾನದ ತರಕಾರಿ ಮಾರುಕಟ್ಟೆಯಲ್ಲೂ ಆಲೂಗಡ್ಡೆ ಬೆಲೆ ಹೆಚ್ಚಾಗಿದೆ. ಫೆಬ್ರವರಿ 18 ರ ಮಾರುಕಟ್ಟೆಯ ಬೆಲೆಯನ್ವಯ ಆಲೂಗಡ್ಡೆಯನ್ನು ಕೆಜಿಗೆ 30-35 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಅದು ಪ್ರತಿ ಕೆ.ಜಿ.ಗೆ 10-12 ರೂಪಾಯಿಗೆ ಮಾರಾಟವಾಗುತ್ತಿತ್ತು. ಸೌತೆಕಾಯಿ ಮತ್ತು ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಬೆಲೆ ಪ್ರತಿ ಕೆ.ಜಿ.ಗೆ 80 ರೂ., ತೊಂಡೆಕಾಯಿ ಬೆಲೆ ಪ್ರತಿ ಕೆ.ಜಿ.ಗೆ 60-80 ರೂ.ಗೆ ಮಾರಾಟವಾಗುತ್ತಿದೆ. ಈ ಮೊದಲು ಪ್ರತಿ ಕೆ.ಜಿ.ಗೆ 40 ರೂ. ಇತ್ತು. ಇದೇ ವೇಳೆ ದಪ್ಪ ಮೆಣಸಿನಕಾಯಿ(ಕ್ಯಾಪ್ಸಿಕಂ) ಪ್ರತಿ ಕೆ.ಜಿ.ಗೆ 80 ರೂ., ಬೆಂಡೆಕಾಯಿ ಪ್ರತಿ ಕೆ.ಜಿ.ಗೆ 120 ರೂ. ಇದಕ್ಕೂ ಮೊದಲು ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗೆ ವ್ಯಾಪಾರವನ್ನು ನಿಷೇಧಿಸಿತ್ತು. ಆ ಸಮಯದಲ್ಲಿ, ಟೊಮ್ಯಾಟೊ ಮತ್ತು ಇತರ ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದವು.

370 ನೇ ವಿಧಿ ಸಂಬಂಧಿತ ಭಾರತದ ನಿರ್ಧಾರವನ್ನು ವಿರೋಧಿಸಿ ಪಾಕಿಸ್ತಾನ ಕೈಗೊಂಡಿರುವ ಹಲವು ಇಂತಹ ನಿರ್ಧಾರಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದೆ. ಆದರೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ. ಇದರಿಂದಾಗಿ ತಾನೇ ತೋಡಿಕೊಂಡ ಹಳ್ಳಕ್ಕೆ ತಾನೇ ಬಿದ್ದಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ.

ಅಸೋಸಿಯೇಟ್ ವೆಬ್‌ಸೈಟ್ ಜೀಬಿಜ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪಾಕಿಸ್ತಾನಕ್ಕೆ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಪೂರೈಸುವ ಆಜಾದ್ಪುರ ಮಂಡಿಯಲ್ಲಿನ ವ್ಯಾಪಾರಿಗಳು ಅಲ್ಲಿಗೆ ಸರಕುಗಳನ್ನು ಕಳುಹಿಸದಿರಲು ನಿರ್ಧರಿಸಿದ್ದಾರೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?