ಜೊಮ್ಯಾಟೋ ವಿರುದ್ಧ ತಿರುಗಿ ಬಿದ್ದ ಡೆಲಿವರಿ ಬಾಯ್ಸ್ - ಜೊಮ್ಯಾಟೋ ಗೆ ಗ್ರಾಹಕರಿಂದ ಶಾಕ್ !

ಕಳೆದ ತಿಂಗಳು ಬಾರಿ ಸುದ್ದಿ ಮಾಡಿದ್ದ ಜೊಮ್ಯಾಟೋ ಡೆಲಿವರಿ ಬಾಯ್ ಫಯಾಜ್ ಜಬಾಲ್ಪುರ್​ದಲ್ಲಿರುವ ಗ್ರಾಹಕನ ಮನೆಗೆ ಊಟ ತೆಗೆದುಕೊಂಡು ಹೋಗಿದ್ದ. ಆತ ಮುಸ್ಲಿಂ ಎಂಬ ಕಾರಣಕ್ಕೆ ಆರ್ಡರ್ ಕ್ಯಾನ್ಸಲ್ ಮಾಡುವಂತೆ ಅಮಿತ್ ಶುಕ್ಲಾ ಜೊಮಾಟೋ ಸಿಬ್ಬಂದಿಗೆ ಕೇಳಿದ್ದ. ಹಾಗೇ, ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ದ. 'ಮುಸ್ಲಿಂ ತಂದುಕೊಟ್ಟ ಊಟವನ್ನು ನಾನು ತಿನ್ನುವುದಿಲ್ಲ ಎಂದು ಹೇಳಿದರೂ ಡೆಲಿವರಿ ಬಾಯ್​ನನ್ನು ಜೊಮಾಟೋ ಬದಲಾಯಿಸುತ್ತಿಲ್ಲ. ಆಯಾ ಧರ್ಮದ ಗ್ರಾಹಕರಿಗೆ ಸರಿಹೊಂದುವ ಡೆಲಿವರಿ ಬಾಯ್​ನನ್ನು ಕಳುಹಿಸುವಷ್ಟು ಸಾಮಾನ್ಯ ಜ್ಞಾನವೂ ಜೊಮಾಟೋಗಿಲ್ಲ' ಎಂದು ಟ್ವೀಟ್​ ಮಾಡಿದ್ದು ಬಾರಿ ಸುದ್ದಿಯಾಗಿತ್ತು.

ಅದಕ್ಕೆ ಮರುಟ್ವೀಟ್ ಮಾಡಿದ್ದ ಜೊಮಾಟೋ, 'ಆಹಾರಕ್ಕೆ ಯಾವುದೇ ಧರ್ಮವಿಲ್ಲ, ಆಹಾರವೇ ಒಂದು ಧರ್ಮ' ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್​ಗೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಆದರೆ ಇದೆ ಟ್ವೀಟ್ ಈವಾಗ ಕಂಪನಿಗೆ ತಿರುಗು ಬಾಣವಾಗಿ ಪರಿಣಮಿಸಿದೆ.

ಪಶ್ಚಿಮ ಬಂಗಾಳದ ಹೌರಾದಲ್ಲಿ ಗೋಮಾಂಸ ಮತ್ತು ಹಂದಿ ಮಾಂಸದಿಂದ ಸಿದ್ಧವಾದ ಆಹಾರವನ್ನು ಡೆಲಿವರಿ ಮಾಡುವಂತೆ ಒತ್ತಾಯ ಹೇರಲಾಗುತ್ತಿದೆಯಂತೆ. ಇದು ಡೆಲಿವರಿ ಬಾಯ್​ಗಳ ಕೋಪಕ್ಕೆ ಕಾರಣವಾಗಿದೆ. ಇದು ನಮ್ಮ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂಥದ್ದು ಎಂದು ಅಲ್ಲಿನ ಕೆಲಸಗಾರರು ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಸಮಸ್ಯೆ ಬಗ್ಗೆ ಸಂಸ್ಥೆ ಚಿಂತೆಯನ್ನೇ ಮಾಡುತ್ತಿಲ್ಲ ಎಂದು ಹೇಳಿದೆ. ಹೀಗಾಗಿ ನಿನ್ನೆ ಇದನ್ನು ಖಂಡಿಸಿ ಘೋಷಣೆ ಕೂಗಿದ್ದ ಜೊಮ್ಯಾಟೋ ಸಿಬ್ಬಂದಿ ಇಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ನಮ್ಮ ಭಾವನೆಗಳ ಜೊತೆ ಜೊಮ್ಯಾಟೋ ಆಟವಾಡುತ್ತಿದೆ. ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗ್ರಾಹಕರು ಏನನ್ನು ಕೇಳುತ್ತಾರೋ ಅದನ್ನು ತಲುಪಿಸಿ ಎಂದು ನಮಗೆ ಸಂಸ್ಥೆ ಹೇಳಿದೆ. ಆದರೆ, ನಾವು ಹಿಂದುಗಳು. ಝೋಮೋಟೋ ಗೆ ಟಾಂಗ್ ಕೊಡಲು ಕೆಲವು ಹಿಂದೂ ಕಾರ್ಯಕರ್ತರು ಹಂದಿ ಮಾಂಸ ಆರ್ಡರ್ ಮಾಡಿದ್ದಾರೆ ಎಂಬ ವದಂತಿ ಇದೆ. ಇದರಿಂದ ಕೆಲವು ಮುಸ್ಲಮಾನ ಡೆಲಿವರಿ ಬಾಯ್ಸ್ ಗಳಿಗೆ ಇರಿಸು ಮುರಿಸು ಉಂಟಾಗಿದೆ.

ನಮ್ಮ ಭಾವನೆಗಳ ಜೊತೆ ಜೊಮ್ಯಾಟೋ ಆಟವಾಡುತ್ತಿದೆ. ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಗ್ರಾಹಕರು ಏನನ್ನು ಕೇಳುತ್ತಾರೋ ಅದನ್ನು ತಲುಪಿಸಿ ಎಂದು ನಮಗೆ ಸಂಸ್ಥೆ ಹೇಳಿದೆ. ಆದರೆ, ನಾವು ಹಿಂದುಗಳು. ನಮಗೆ ಗೋಮಾಂಸದ ಆಹಾರಗಳನ್ನು ಡೆಲಿವರಿ ಮಾಡಲು ಸೂಚಿಸುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಮುಸ್ಲಿಂ ಗೆಳೆಯರಿಗೆ ಹಂದಿ ಮಾಂಸದ ಆಹಾರಗಳನ್ನು ನೀಡಬಹುದು. ಇದನ್ನು ನಾವು ಒಪ್ಪುವುದಿಲ್ಲ,” ಎಂದು ಪ್ರತಿಭಟನಾಕಾರರು ಹೇಳೀದ್ದಾರೆ.

ಈ ವಿಚಾರ ಸರ್ಕಾದ ಗಮನಕ್ಕೆ ಬಂದಿದ್ದು, “ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಯಾವುದೇ ಸಂಸ್ಥೆಯೂ ಅಡ್ಡಿ ಮಾಡಬಾರದು,” ಎಂದು ಹೇಳಿದೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?