ಕುಮಾ'ರಸ್ವಾಮಿಯವರ ಅ'ಪ್ಪನಿಗೆ ವ'ಯಸ್ಸಾಗಿಲ್ವೇ..? - ಈ'ಶ್ವರಪ್ಪ ಪ್ರಶ್ನೆ..!!??

ಈಶ್ವರಪ್ಪ ಇಂದು ಸ್ವಲ್ಪ ಗರಂ ಆಗಿದ್ದರು. ನೆರೆ ಪಿಡೀತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪತ್ರಕರ್ತರ ಜೊತೆ ಮಾತನಾಡುತ್ತಿರುವಾಗ ಕುಮಾರಸ್ವಾಮಿಯವರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಾಗೂ ಅವರಪ್ಪ ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿಲ್ಲವೇ , ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡುವುದನ್ನು ಸ್ವಾಗತಿಸುತ್ತೇನೆ ಆದರೆ, ವಯಸ್ಸಾಗಿದೆ ಎಂದು ಕೀಳುಮಟ್ಟದ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

ಕುಮಾರಸ್ವಾಮಿ ರಾಜಕಾರಣ ಮಾಡಿದರೆ ನಮಗೂ ರಾಜಕಾರಣ ಮಾಡುವುದಕ್ಕೆ ಬರುತ್ತದೆ. ಆದರೆ, ಇದು ರಾಜಕಾರಣ ಮಾಡುವ ಸಮಯವಲ್ಲ, ರಾಜ್ಯದ ಜನ ನೆರೆ , ಅತಿವೃಷ್ಟಿಯಿಂದ ಪರಿತಪಿಸುತ್ತಿದ್ದಾರೆ. ಎಲ್ಲಾ ಪಕ್ಷದವರು ಒಟ್ಟಾಗಿ ಪರಿಹಾರ ಹುಡುಕುವುದು ಸೂಕ್ತ ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಯಡಿಯೂರಪ್ಪ ಯಶಸ್ವಿಯಾಗಿ ನೆರೆ ಪರಿಹಾರ ಕಾರ್ಯಕ್ರಮ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರವು ಸಹ ಸರಿಯಾದ ನೆರವು ನೀಡುತ್ತಿದೆ. ಇನ್ನು ಹೆಚ್ಚಿನ ಪರಿಹಾರಕ್ಕೆ ಕೇಂದ್ರವನ್ನು ಆಗ್ರಹಿಸುತ್ತೆವೆ. ಕೇಂದ್ರ ಸರ್ಕಾರ ನಮಗೆ ಸಂಪೂರ್ಣ ಸಹಕಾರ ನೀಡಲಿದೆ. ಇದೇ ಆಗಸ್ಟ್ 16ರಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋಗಿ ಇನ್ನು ಹೆಚ್ಚಿನ ಪರಿಹಾರದ ಅನುದಾನವನ್ನ ರಾಜ್ಯಕ್ಕೆ ತರಲಿದ್ದಾರೆ ಎಂದು ತಿಳಿಸಿದರು.

ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ನೆರೆ ಪೀಡಿತ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿಯವರು , ಪ್ರವಾಹ ಪರಿಸ್ಥಿತಿ ಎದುರಿಸಲು ಸರ್ಕಾರದಲ್ಲಿ ಆರ್ಥಿಕವಾಗಿ ಯಾವುದೇ ರೀತಿ ಸಮಸ್ಯೆಗಳು ಇಲ್ಲದಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದುವರೆಗೂ ಯಾರಿಗೂ ಪರಿಹಾರ ಕೊಟ್ಟಿಲ್ಲ. ಒಂದೆಡೆ ಯಡಿಯೂರಪ್ಪನವರಿಗೆ ವಯಸ್ಸಿನ ಸಮಸ್ಯೆ ಕಾಡುತ್ತಿರಬಹುದು. ಮತ್ತೊಂದೆಡೆ ಸಚಿವ ಸಂಪುಟ ಇಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬಹಳ ಸಮರ್ಥರಿದ್ದಾರೆ. ಅವರ ಸಲಹೆ ಪಡೆದುಕೊಂಡು ಪರಿಹಾರೋಪಾಯ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಬೇಕು ಎಂದು ಹೇಳಿದ್ದರು .

ಪ್ರವಾಹ ಕಡಿಮೆಯಾಗುತ್ತಿರುವಾಗಲೇ, ರಾಜಕಾರಣಿಗಳ ಮಾತಿನ ಪ್ರಹಾರ ಜೋರಾಗಿ ನಡೆಯುತ್ತಿದೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?