ಖ'ರ್ಗೆ ಮತ್ತು ಮಾಜಿ ಸ್ಪೀ'ಕರ್​ ರಮೇಶ್​ ಕುಮಾರ್​ ಗೆ ಡೋಂ'ಟ್ ಕೇ'ರ್ ಎಂದ ಇಡಿ ? ಯಾಕೆ ಗೊತ್ತಾ

ಇಡಿ ಕಚೇರಿಯಲ್ಲಿ ಇಡಿ ಅಧಿಕಾರಿಗಳ ವಶದಲ್ಲಿ ವಿಚಾರಣೆಗೆ ಒಳಪಟ್ಟಿರುವ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿಯಾಗಲು ಕಾಂಗ್ರೆಸ್​ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ತೆರಳಿದ್ದರು. ಆದರೆ ಇವರಿಗೆ ಅವಕಾಶ ನಿರಾಕರಿಸಲಾಯಿತು ಎನ್ನಲಾಗಿದೆ. ಇಡಿ ವಶದಲ್ಲಿದ್ದರೂ ಡಿಕೆಶಿ ಅವರನ್ನು ದಿನದಲ್ಲಿ ಅರ್ಧ ಗಂಟೆ ಭೇಟಿಯಾಗಲು ಅವಕಾಶ ಮಾಡಿಕೊಡಲಾಗುತ್ತದೆ ಎಂಬ ಕಾರಣಕ್ಕಾಗಿ ಅವರನ್ನು ಭೇಟಿಯಾಗಲು ಕಾಂಗ್ರೆಸ್​ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಇಡಿ ಕಚೇರಿಗೆ ತೆರಳಿದ್ದರು. ಮೊದಲಿಗೆ ಭೇಟಿಗೆ ಅವಕಾಶ ಕೊಡುವುದಾಗಿ ಇವರೆಲ್ಲರೂ ಒಳಗೆ ಕರೆದೊಯ್ಯಲಾಗಿತ್ತು. ಮಾಹಿತಿಯಲ್ಲವನ್ನೂ ಪಡೆದುಕೊಳ್ಳಲಾಗಿತ್ತು.

ಆದರೆ ದಿಢೀರನೆ ಮನಸ್ಸು ಬದಲಿಸಿದ ಅಧಿಕಾರಿಗಳು ಡಿಕೆಶಿ ಭೇಟಿಗೆ ಇವರಿಬ್ಬರಿಗೂ ಅವಕಾಶ ನಿರಾಕರಿಸಿದರು ಎನ್ನಲಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್​ಕುಮಾರ್​, ಡಿಕೆಶಿ ಅವರ ಭೇಟಿಗೆ ಒಂದೊಂದು ನಿಮಿಷ ಕಾಲಾವಕಾಶ ಕೊಡುತ್ತಾರೆ ಎಂದು ಹೇಳಿದ್ದರು. ಹಾಗಾಗಿ ಅವರಿಗೆ ಸಾಂತ್ವಾನ ಹೇಳಲೆಂದು ಖಾನ್​ ಮಾರ್ಕೆಟ್​ನಲ್ಲಿರುವ ಇಡಿ ಕಚೇರಿಗೆ ಬಂದಿದ್ದೆವು. ಮೊದಲು ಇಂತಿಷ್ಟು ಜನರಿಗೆ ಮಾತ್ರ ಅವಕಾಶ ಎಂದು ಅಧಿಕಾರಿಗಳು ಹೇಳಿದ್ದರು. ಅವರು ಹೇಳಿದ್ದಷ್ಟು ಜನರು ಕಚೇರಿ ಒಳಗೆ ಹೋದೆವು. ನಮ್ಮ ವಿವರಗಳನ್ನು ಸಂಗ್ರಹಿಸಿದರು. ಬಳಿಕ ದಿಢೀರನೆ ತಮ್ಮ ಮನಸ್ಸು ಬದಲಿಸಿದ ಅಧಿಕಾರಿಗಳು ಕೇವಲ ಮನೆಯವರಿಗೆ ಮಾತ್ರ ಭೇಟಿಗೆ ಅವಕಾಶ ಕೊಡುವುದಾಗಿ ಹೇಳಿ ನಮ್ಮೆಲ್ಲರಿಗೂ ಅವಕಾಶ ನಿರಾಕರಿಸಿದರು ಎಂದರು.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !