ಇ.ಡಿ ಮುಂದೆ ಡಿಕೆಶಿ ಬಾಯ್ಬಿಟ್ಟ ಸ'ತ್ಯ, ಸಿದ್ದು ಆಪ್ತರಲ್ಲಿ ತಳ'ಮಳ, ಯಾಕೆ ಗೊತ್ತಾ ?

ಇತ್ತೀಚೆಗೆ ಡಿ ಕೆ ಶಿವಕುಮಾರ್ ಅವರನ್ನು ಇ.ಡಿ ಅಧಿಕಾರಿಗಳು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಎಂಎಲ್​ಸಿ ಗೋವಿಂದರಾಜು ಅವರ ಡೈರಿಗು ಡಿಕೆಶಿ ಅವರ ಪ್ರಕರಣಕ್ಕೂ ನಂಟಿದೆ ಎಂಬ ಮಾತುಗಳು ಕೇಳಿಬಂದಿದೆ. ಡೈರಿ ಬರೆದಿರುವ ಎಂಎಲ್​ಸಿ ಗೋವಿಂದರಾಜು ಹಾಗೂ ಕಪ್ಪ ಕಾಣಿಕೆ ಕೊಟ್ಟಿದ್ದರೆನ್ನಲಾದ ಹೆಚ್.ಡಿ. ಮಹದೇವಪ್ಪ ಮತ್ತು ಕೆ.ಜೆ. ಜಾರ್ಜ್ ಅವರಿಗೆ ಈ ಪ್ರಕರಣ ಉರುಳಾಗಬಹುದೆನ್ನಲಾಗಿದೆ. ಹಿರಿಯ ಕಾಂಗ್ರೆಸ್ಸಿಗರಾದ ಪಿ. ಚಿದಂಬರಮ್ ಮತ್ತು ಡಿಕೆ ಶಿವಕುಮಾರ್ ಅವರ ಬಂಧನವಾಗಿರುವ ಹಿನ್ನೆಲೆಯಲ್ಲಿ ಡೈರಿ ಪ್ರಕರಣ ಮರುಜೀವ ಪಡೆದಿರುವುದು ಇನ್ನೂ ಹಲವು ನಾಯಕರ ಎದೆ ನಡುಗಿಸಿದೆ. ಕುತೂಹಲವೆಂದರೆ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣಕ್ಕೂ ಕೂಡ ಗೋವಿಂದ ರಾಜು ಡೈರಿಯೇ ಮೂಲವಾಗಿರುವುದು.

ಡೈರಿಯ ಮೂರನೇ ಪುಟದಲ್ಲಿ ನಮೂದಾಗಿರುವ ಕೋಡ್​ವರ್ಡ್​ಗಳು ನಿರ್ದಿಷ್ಟ ನಾಯಕರಿಗೆ ಸಂಬಂಧಿಸಿದ್ದಾಗಿದೆ. ಈ ನಾಯಕರಿಂದ ಕೋಟಿಗಟ್ಟಲೆ ಹಣ ಪಡೆದು ಅದನ್ನು ಹೈಕಮಾಂಡ್​
ಗೆ ತಲುಪಿಸಲಾಗಿದೆ. ಹವಾಲ ಜಾಲದ ಮೂಲಕ ಹಣದ ವಹಿವಾಟು ನಡೆದಿದೆ ಎಂಬುದು ಐಟಿ ಅಧಿಕಾರಿಗಳ ಶಂಕೆಯಾಗಿದೆ.

2016ರಲ್ಲಿ ಆದಾಯ ತೆರಿಗೆ ಕಟ್ಟದವರ ಮೇಲೆ ನಿಯಮಿತವಾಗಿ ನಡೆಯುವ ರೇಡ್ ವೇಳೆ ಎಂಎಲ್​ಸಿ ಗೋವಿಂದ ರಾಜು ಮನೆಯಲ್ಲಿ ಡೈರಿಯೊಂದು ಸಿಕ್ಕಿತ್ತು. ಈ ಪುಸ್ತಕದ ಕೆಲ ಪುಟಗಳಲ್ಲಿ ಕೆಲ ಹೆಸರುಗಳ ಕೋಡ್​ವರ್ಡ್ ಮತ್ತು ಹಣದ ವಿವರವನ್ನು ಕೈಬರಹದಲ್ಲಿ ಬರೆಯಲಾಗಿತ್ತು. ಅದರಲ್ಲಿ ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಕೋಡ್​ವರ್ಡ್​ನಲ್ಲಿ ಬರೆಯಲಾಗಿದೆ ಎಂಬುದು ಐಟಿ ಇಲಾಖೆಯ ಶಂಕೆಯಾಗಿದೆ.

ಇದರ ಜೊತೆಗೆ ಇನ್ನೂ ಒಂದಿಷ್ಟು ಹೆಸರುಗಳ ಕೋಡ್​ವರ್ಡ್​ಗಳನ್ನು ಡೈರಿಯ ಪುಟಗಳಲ್ಲಿ ಬರೆಯಲಾಗಿತ್ತು. ಗೋವಿಂದರಾಜು ಅವರು ಆರಂಭದಲ್ಲಿ ಈ ಡೈರಿ ತನ್ನದಲ್ಲ, ತಾನೇನೂ ಬರೆದಿಲ್ಲ ಎಂದು ವಾದಿಸಿದ್ದರು. ಆದರೆ, ನಂತರದ ವಿಚಾರಣೆ ವೇಳೆ ಅವರು ಈ ಡೈರಿಯಲ್ಲಿರುವುದು ತನ್ನ ಕೈಬರಹವೇ ಎಂದು ಒಪ್ಪಿಕೊಂಡಿದ್ದರು. ಈ ತಪ್ಪೊಪ್ಪಿಗೆಯೇ ಐಟಿ ಇಲಾಖೆಯ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಎಸ್​ಜಿ: ಸೋನಿಯಾ ಗಾಂಧಿ
ಆರ್​ಜಿ: ರಾಹುಲ್ ಗಾಂಧಿ
ಎಂಆರ್​ವಿ: ಮೋತಿಲಾಲ್ ವೋರಾ(ಎಐಸಿಸಿ ಮಾಜಿ ಖಜಾಂಚಿ)
ಆರ್​ವಿಡಿ: ಆರ್.ವಿ. ದೇಶಪಾಂಡೆ
ಡಿಕೆಎಸ್: ಡಿಕೆ ಶಿವಕುಮಾರ್
ಕೆಂಪ್: ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ (ಸಿದ್ದರಾಮಯ್ಯ ಅವರ ಆಪ್ತ)
ಹೆಚ್​ಸಿಎಂ: ಹೆಚ್.ಡಿ. ಮಹದೇವಪ್ಪ

ಇದೇ ಕಾರಣಕ್ಕೆ ಕೆ.ಜೆ. ಜಾರ್ಜ್, ಮಹದೇವಪ್ಪ ಮತ್ತು ಗೋವಿಂದ ರಾಜು ಅವರ ಎದೆಯಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಈ ಮೂವರೂ ಕೂಡ ತಮ್ಮ ಆಪ್ತರ ಬಳಿ ತಮ್ಮ ಆತಂಕ ತೋಡಿಕೊಂಡಿದ್ದರೆಂಬ ಮಾಹಿತಿ ಹೊರಬಿದ್ದಿದೆ(ಕೃಪೆ ನ್ಯೂಸ್೧೮ಕನ್ನಡ).

ಚುನಾವಣಾ ಪ್ರಚಾರದ ಸಮಯದಲ್ಲಿ ಈ ಡೈರಿ ವಿಷಯವನ್ನು ಅಮಿತ್ ಶಾ ಪ್ರಸ್ತಾಪಿಸಿದ್ದರು.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !