ಮಾವಿನ ಹಣ್ಣಿನ ತೋಟದಲ್ಲಿ ಕೂಲಿಯಾಗಿದ್ದ ಡಾ. ಕೆ.ಶಿವನ್, ಜೀವನದಲ್ಲಿ ಜಿಗುಪ್ಸೆಯಾಗಿರುವವರು ಒಮ್ಮೆ ಓದಲೇಬೇಕಾದ ಸುದ್ದಿ !

ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದವರೇ ಅತಿ ಹೆಚ್ಚು ಉನ್ನತ ಹುದ್ದೆಗೆ ಹೋಗಿರುವವರು, ಟೀ ಮಾರುತಿದ್ದ ವ್ಯಕ್ತಿ ಪ್ರಧಾನಿಯಾದರು, ಹಾಗೆ ಇಸ್ರೋ ಅಧ್ಯಕ್ಷರು ಕೂಡ ಬಡ ಕುಟುಂಬದಿಂದ ಮೇಲೆ ಬಂದು ಭಾರತ ಮಾತೆಗೆ ಸೇವೆ ಸಲ್ಲಿಸುತ್ತಿದ್ದಾರೆ.
ಮಾವಿನ ಹಣ್ಣಿನ ತೋಟದಲ್ಲಿ ಕೂಲಿಯಾಗಿದ್ದ ಡಾ. ಕೆ.ಶಿವನ್ ಅವರು ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ನೇತೃತ್ವವನ್ನು ವಹಿಸಿದ್ದು ಅವರು ಬೆಳೆದು ಬಂದ ಸುದೀರ್ಘ ಪಯಣದ ಚಿತ್ರಣವನ್ನು ನೀಡುತ್ತದೆ. ಇಂದು ಪ್ರಧಾನಿ ಮೋದಿಯವರ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರು ಏಕಾಏಕಿ ಭಾವುಕರಾಗಿರುವುದು ಚಂದ್ರಯಾನ 2 ಯೋಜನೆ ಬಗ್ಗೆ ಅವರಿಗಿರುವ ಬದ್ದತೆಯನ್ನು ತೋರಿಸುತ್ತದೆ. ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಬಹುತೇಕ ಭಾಗ ತಾವು ಪ್ಯಾಂಟ್ ನ್ನೇ ತೋಡುತ್ತಿರಲಿಲ್ಲ, ಬದಲಾಗಿ ತಾವು ಉಡುತ್ತಿದ್ದಿದ್ದು ಧೋತಿ ಎಂದು ಹೇಳಿದರು. ನನಗೆ ಏನು ಸಿಕ್ಕಿಲ್ಲ ಎನ್ನುವುದರ ಬಗ್ಗೆ ನಾನು ಚಿಂತಿಸಲಿಲ್ಲ, ಆದರೆ ನನಗೆ ಸಿಕ್ಕಿದ್ದರಲ್ಲೆ ಗುರಿಯನ್ನು ತಲುಪಿದೆ' ಎಂದು ಸಂತೃಪ್ತರಾದರು.

ಇದೇ ವೇಳೆ ಅವರು ತಮ್ಮ ಬಾಲ್ಯ ಜೀವನವನ್ನು ಸ್ಮರಿಸುತ್ತಾ 'ನನ್ನ ಗ್ರಾಮದಲ್ಲಿ ವಿಶೇಷ ಜೀವನವನ್ನು ಕಳೆದೆ. ನಾನು ಆಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ರಜೆ ದಿನಗಳಲ್ಲಿ ನನ್ನ ತಂದೆಗೆ ಸಹಾಯ ಮಾಡಲು ಮಾವಿನ ಹಣ್ಣಿನ ತೋಟಕ್ಕೆ ಹೋಗುತ್ತಿದ್ದೆ. ನಾನು ಹೋದಾಗಲೆಲ್ಲಾ ನಮ್ಮಪ್ಪ ಕೂಲಿಗೆ ಹೇಳುತ್ತಿರಲಿಲ್ಲ' ಎಂದರು. ಇದೇ ವೇಳೆ ತಮ್ಮ ತಂದೆ ಕಾಲೇಜುಗಳನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ವಿವರಿಸಿದ ಅವರು 'ಬಹುತೇಕರು ತಮ್ಮ ಕಾಲೇಜನ್ನು ಆಯ್ಕೆ ಮಾಡಬೇಕಾದರೆ ಹಲವು ಮಾನದಂಡಗಳನ್ನು ಹೊಂದಿರುತ್ತಾರೆ. ಆದರೆ ನನ್ನ ತಂದೆ ಅವರಿಗಿಂತ ಭಿನ್ನವಾಗಿದ್ದರು. ಅವರು ಹೆಚ್ಚಾಗಿ ಮನೆಗೆ ಹತ್ತಿರವಿರುವ ಕಾಲೇಜಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದರು. ಆ ಮೂಲಕ ಕಾಲೇಜು ಮುಗಿದ ನಂತರ ಮನೆಯಲ್ಲಿ ಅವರಿಗೆ ಸಹಾಯ ಮಾಡಲಿ ಎಂದು ಅವರು ಹೀಗೆ ಮಾಡುತ್ತಿದ್ದರು. ನಮ್ಮ ಮನೆ ಪರಿಸ್ಥಿತಿ ಅಷ್ಟಕಷ್ಟೇ ಎನ್ನುವಂತಿತ್ತು' ಎಂದು ತಿಳಿಸಿದರು

ನಾನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದಾಗ ಸ್ಯಾಂಡಲ್ ಧರಿಸಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ನಾವು ಬರಿಗಾಲಿನಲ್ಲಿ ನಡೆಯುತ್ತಿದ್ದೆ. ನಮ್ಮಲ್ಲಿ ಯಾವುದೇ ಪ್ಯಾಂಟ್ ಇರಲಿಲ್ಲ, ನಾವು ಯಾವಾಗಲೂ ಧೋತಿಯಲ್ಲಿರುತ್ತಿದ್ದೆನು" ಎಂದು ಡಾ.ಶಿವನ್ ನಗುವಿನೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ತಮ್ಮ ಇಂತಹ ಕಷ್ಟಕರ ಸಂದರ್ಭದಲ್ಲಿಯೂ ಪೋಷಕರು ಮೂರು ಹೊತ್ತು ಊಟ ನೀಡಲು ಸಮರ್ಥರಾಗಿದ್ದರು. ಇದಕ್ಕ್ಕೆತಾವು ಕೃತಜ್ನರಾಗಿರಬೇಕು 'ಎಂದು ಹೇಳಿದರು

ನಾನು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದಾಗ ಸ್ಯಾಂಡಲ್ ಧರಿಸಲು ಪ್ರಾರಂಭಿಸಿದೆ. ಅಲ್ಲಿಯವರೆಗೆ ನಾವು ಬರಿಗಾಲಿನಲ್ಲಿ ನಡೆಯುತ್ತಿದ್ದೆ. ನಮ್ಮಲ್ಲಿ ಯಾವುದೇ ಪ್ಯಾಂಟ್ ಇರಲಿಲ್ಲ, ನಾವು ಯಾವಾಗಲೂ ಧೋತಿಯಲ್ಲಿರುತ್ತಿದ್ದೆನು" ಎಂದು ಡಾ.ಶಿವನ್ ನಗುವಿನೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ತಮ್ಮ ಇಂತಹ ಕಷ್ಟಕರ ಸಂದರ್ಭದಲ್ಲಿಯೂ ಪೋಷಕರು ಮೂರು ಹೊತ್ತು ಊಟ ನೀಡಲು ಸಮರ್ಥರಾಗಿದ್ದರು. ಇದಕ್ಕ್ಕೆತಾವು ಕೃತಜ್ನರಾಗಿರಬೇಕು 'ಎಂದು ಹೇಳಿದರು

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !