ಯಾವ ದೇಶವು ಮಾಡದ ಸಾಧನೆಯನ್ನು ಇಸ್ರೋ ಮಾಡಿದೆ, ನೀವು ನಮಗೆ ಸ್ಪೂರ್ತಿ ಎಂದ ನಾಸಾ!

ಕಳೆದ 6 ದಶಕಗಳಲ್ಲಿ ಶೇ 60 ರಷ್ಟು ಚಂದ್ರಯಾನಗಳು ಮಾತ್ರ ಯಶಸ್ವಿಯಾಗಿವೆ ಪ್ರಮಾಣವನ್ನು ಹೊಂದಿವೆ ಎಂದು ನಾಸಾ ಹೇಳಿದೆ.ಯುಎಸ್ ಬಾಹ್ಯಾಕಾಶ ಏಜೆನ್ಸಿಯ ಮೂನ್ ಫ್ಯಾಕ್ಟ್ ಶೀಟ್ ಪ್ರಕಾರ, ಕಳೆದ 60 ವರ್ಷಗಳಲ್ಲಿ 109 ಚಂದ್ರಯಾನಗಳಲ್ಲಿ 61 ಮಾತ್ರ ಯಶಸ್ವಿಯಾಗಿವೆ ಎಂದು ಹೇಳಿದೆ. ಇದುವರೆಗೂ ಯಾವ ದೇಶವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಯತ್ನ ಮಾಡಿಲ್ಲ ಆದರೆ ಭಾರತದ ಇಸ್ರೋ ಮಾಡಿರೋದುವುದು ಹೆಮ್ಮೆಯ ವಿಷಯ ಎಂದು NASA ಹೇಳಿದೆ.

ಈ ಮಧ್ಯೆ, ಇಸ್ರೋಗೆ ಅಮೆರಿಕದ ನಾಸಾ ಧೈರ್ಯ ತುಂಬಿದೆ. ಬಾಹ್ಯಾಕಾಶ ಭಾರೀ ಕಷ್ಟಕರ. ಆದರೂ, ಭಾರತದ ಸಾಧನೆ ಏನೂ ಕಡಿಮೆಯಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಕಾರ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಒಟ್ಟಾಗಿ ಶ್ರಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ.

1958 ರಿಂದ 2019 ರವರೆಗೆ ಭಾರತ ಮತ್ತು ಯುಎಸ್, ಯುಎಸ್ಎಸ್ಆರ್ (ಈಗ ರಷ್ಯಾ), ಜಪಾನ್, ಯುರೋಪಿಯನ್ ಯೂನಿಯನ್, ಚೀನಾ ಮತ್ತು ಇಸ್ರೇಲ್ ಕಕ್ಷೆಗಳು, ಲ್ಯಾಂಡರ್‌ಗಳು ಮತ್ತು ಫ್ಲೈಬೈಗಳನ್ನೊಳಗೊಂಡ ವಿಭಿನ್ನ ಚಂದ್ರಯಾನವನ್ನು ಪ್ರಾರಂಭಿಸಿದವು .ಆಗಸ್ಟ್ 17, 1958 ರಲ್ಲಿ ಚಂದ್ರನ ಮೊದಲ ಕಾರ್ಯಾಚರಣೆಯನ್ನು ಯುಎಸ್ ಕೈಗೊಂಡಿತ್ತು, ಆದರೆ ಪಯೋನೀರ್ ಬಾಹ್ಯಾಕಾಶ ನೌಕೆಯ ಉಡಾವಣೆಯು ವಿಫಲವಾಯಿತು.

ಇದರಲ್ಲಿ ಜನವರಿ 4, 1959 ರಂದು ಯುಎಸ್ಎಸ್ಆರ್ ಕೈಗೊಂಡ ಯಶಸ್ವಿ ಮಿಷನ್ ಲೂನಾ 1 ಆಗಿದೆ. ಇದು ಮೊದಲ ಚಂದ್ರನ ಫ್ಲೈಬೈ ಮಿಷನ್ ಆಗಿದೆ. ಇದರ ಯಶಸ್ಸು ಆರನೇ ಕಾರ್ಯಾಚರಣೆಯಲ್ಲಿ ಸಫಲವಾಗಿದೆ.ಆಗಸ್ಟ್ 1958 ರಿಂದ ನವೆಂಬರ್ 1959 ರವರೆಗೆ, ಯುಎಸ್ ಮತ್ತು ಯುಎಸ್ಎಸ್ಆರ್ 14 ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು.ಇವುಗಳಲ್ಲಿ, ಯುಎಸ್ಎಸ್ಆರ್ ಪ್ರಾರಂಭಿಸಿದ ಲೂನಾ 1, ಲೂನಾ 2 ಮತ್ತು ಲೂನಾ 3 ಮಾತ್ರ ಯಶಸ್ವಿಯಾಗಿದೆ.

ಜುಲೈ 1964 ರಲ್ಲಿ ಯುಎಸ್ ಪ್ರಾರಂಭಿಸಿದ ರೇಂಜರ್ 7 ಮಿಷನ್ ಚಂದ್ರನ ಕ್ಲೋಸ್-ಅಪ್ ಚಿತ್ರಗಳನ್ನು ಮೊದಲ ಬಾರಿಗೆ ತೆಗೆಯಿತು. ಇದಾದ ನಂತರ ಜಪಾನ್, ಯುರೋಪಿಯನ್ ಯೂನಿಯನ್, ಚೀನಾ, ಭಾರತ ಮತ್ತು ಇಸ್ರೇಲ್ ಚಂದ್ರಯಾನಕ್ಕೆ ನಂತರ ಪ್ರವೇಶಿಸಿದವು. ಜಪಾನ್ 1990 ರ ಜನವರಿಯಲ್ಲಿ ಹಿಟೆನ್ ಎಂಬ ಕಕ್ಷೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇದು ಜಪಾನ್‌ನ ಮೊದಲ ಚಂದ್ರನಯಾನವಾಗಿದೆ. ಅದರ ನಂತರ, ಸೆಪ್ಟೆಂಬರ್ 2007 ರಲ್ಲಿ, ಜಪಾನ್ ಮತ್ತೊಂದು ಆರ್ಬಿಟರ್ ಮಿಷನ್ ಸೆಲೀನ್ ಅನ್ನು ಪ್ರಾರಂಭಿಸಿತು.

ಯುರೋಪ್ (ಸ್ಮಾರ್ಟ್ -1), ಜಪಾನ್ (ಸೆಲೀನ್), ಚೀನಾ (ಚಾಂಗ್-ಇ 1), ಭಾರತ (ಚಂದ್ರಯಾನ್ 1) ಮತ್ತು ಯುಎಸ್ (ಲೂನಾರ್ ರೆಕಾನೈಸನ್ಸ್ ಆರ್ಬಿಟರ್ ಮತ್ತು ಎಲ್‌ಸಿಸಿಆರ್ಒಎಸ್ಎಸ್) - 2000 ರಿಂದ 2009 ರವರೆಗಿನ ಅವಧಿಯಲ್ಲಿ ಆರು ಚಂದ್ರನ ಕಾರ್ಯಾಚರಣೆಗಳು ನಡೆದಿವೆ.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !