ಸಸಿಕಾಂತ್ ಸೆಂಥಿಲ್ ತನ್ನ ಬೆಂಬಲಿಗರೊಂದಿಗೆ ಪಾ'ಕ್ ಗೆ ಹೋಗಲಿ - ಅನಂತ್ ಕುಮಾರ್ ಹೆಗ್ಡೆ !

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಐಎಎಸ್ ಸೇವೆಗೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು, ಕೆಲವರು ಹೇಳುವ ಪ್ರಕಾರ ಅವರು ಕೇಂದ್ರ ಸರ್ಕಾರದ ಮೇಲೆ ಮುನಿಸು ಕಾರಣ ಎಂದು ಹೇಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ, ಅವರು 2017 ಅಕ್ಟೋಬರ್ ನಿಂದ ದ ಕ ಜಿಲ್ಲಾಧಿಕಾರಿಯಾಗಿದ್ದರು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ, ಉತ್ತಮ ಸೇವೆ ಸಲ್ಲಿಸಿದ್ದ ಸೆಂಥಿಲ್ ಅವರು ಕಳೆದ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದಾತ್ಮಕ ಟ್ವೀಟ್ ಮಾಡಿದ್ದು ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದಾರೆ.

ಕಳೆದ ವಾರವಷ್ಟೇ ವೃತ್ತಿಗೆ ರಾಜೀನಾಮೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆ, ಈತ(ಐಎಎಸ್ ಅಧಿಕಾರಿ ಸೆಂಥಿಲ್) ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು! ಇದು ಪ್ರಾಯೋಗಿಕವಾಗಿಯು ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು! ಇದರಲ್ಲಾದರು ನೀಯತ್ತು ತೋರಿಸಲಿ ಎಂದು ಬರೆದಿದ್ದಾರೆ.

ತಮಿಳುನಾಡು ಮೂಲದವರಾದ ಸಸಿಕಾಂತ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರ್ ಪದವೀಧರರು. ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದರು

ನಮ್ಮ ವೈವಿಧ್ಯಮಯ ಪ್ರಜಾಪ್ರಭುತ್ವದ ಮೂಲಭೂತ ರಚನೆಗಳ ಜೊತೆ ಹಿಂದೆಂದೂ ಕಂಡಿರದಂತೆ ಅಭೂತಪೂರ್ವ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿರುವಾಗ ಸರ್ಕಾರದಲ್ಲಿ ನಾಗರಿಕ ಸೇವಕರಾಗಿ ಮುಂದುವರಿಯುವುದು ನನಗೆ ಅನೈತಿಕ ಎಂದು ಭಾವಿಸಿದ್ದರಿಂದ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ಸಸಿಕಾಂತ್ ಸೆಂಥಿಲ್ ಅವರು ತಮ್ಮ ಐಎಎಸ್ ಸೇವೆಗೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ ಬಳಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ತಮ್ಮ ರಾಜೀನಾಮೆ ಸಂಪೂರ್ಣವಾಗಿ ವೈಯಕ್ತಿಕವಾದುದು ಮತ್ತು ಇದರಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಪ್ರಭಾವವಿಲ್ಲ ಎಂದು ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !