ಬೆಂಗಳೂರಿನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯಿಂದ ಎಷ್ಟು ದಂಡ ವಸೂಲಿಯಾಗಿದೆ ಗೊತ್ತಾ?

ಸಂಚಾರ ನಿಯಮಗಳಿಗೆ ರಾಷ್ಟ್ರದಲ್ಲಿ ಒಂದಿಷ್ಟೂ ಗೌರವ ಕೊಡುತ್ತಿರಲಿಲ್ಲ. ನಿಯಮಗಳು ಇರುವುದು ಉಲ್ಲಂಘಿಸಲು ಎಂಬಂತೆ ಜನರು ವರ್ತಿಸುತ್ತಿದ್ದರು. ಹಾಗಾಗಿ ಸಂಚಾರ ನಿಯಮವನ್ನು ಗೌರವಿಸಿ, ಪಾಲಿಸುವಂತೆ ಮಾಡಲು ಜುಲ್ಮಾನೆಗಳನ್ನು ಹತ್ತಾರುಪಟ್ಟು ಹೆಚ್ಚಿಸಲಾಗಿದೆಯೇ ಹೊರತು, ಅದರಿಂದ ಆದಾಯ ಗಳಿಸುವ ಉದ್ದೇಶವಿಲ್ಲ ಎಂದು ಕೇಂದ್ರ ಸಾರಿಗೆ ಸಚಿವರು ಹೇಳಿದ್ದರು. ಈಗಾಗಲೇ ಹೊಸ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದ್ದು, ವಾಹನ ಸವಾರರಿಗೆ ಹೊಸ ನಿಯಮಗಳು ಮತ್ತು ದಂಡದ ಪ್ರಮಾಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಸಂಚಾರಿ ಪೊಲೀಸರು ಹಾಕಿಕೊಳ್ಳುತ್ತಿದ್ದಾರೆ.

ಮೊದಲ ದಿನ ಒಟ್ಟು 2,918 ಪ್ರಕರಣಗಳು ದಾಖಲಾಗಿದ್ದು, 30 ಲಕ್ಷ ರೂ. ದಂಡ ಸಂಗ್ರಹವಾಗಿತ್ತು. ಆನಂತರ 5 ದಿನಗಳಲ್ಲಿ ಅಂದರೆ ಸೆ.4ರಿಂದ ಸೆ.9 ಬೆಳಗ್ಗೆ 10 ಗಂಟೆಯವರಗೆ 1,968 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಇದುವರೆಗೆ ಒಟ್ಟು 72.49 ಲಕ್ಷ ರೂ. ದಂಡ ಸಂಗ್ರಹವಾಗಿದೆ. 5 ದಿನಗಳಲ್ಲಿ ಕೇವಲ 72 ಪಾನಮತ್ತ ಚಾಲನೆ ಪ್ರಕರಣಗಳು ದಾಖಲಾಗಿವೆ, ಹೆಲ್ಮೆಟ್​ರಹಿತ ಚಾಲನೆಯ 1,968 ಪ್ರಕರಣ ದಾಖಲಾಗಿದ್ದು, 19.68 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಹಿಂಬದಿ ಸವಾರ ಹೆಲ್ಮೆಟ್​ರಹಿತ ಚಾಲನೆಯಿಂದ 26.45 ಲಕ್ಷ ರೂ. ಮತ್ತು ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ ಪ್ರಕರಣಗಳಿಂದ 13.90 ಲಕ್ಷ ರೂ. ವಸೂಲಿಯಾಗಿದೆ.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !