ಬಿಜೆಪಿಯ ನಾಟಕ ಮಂಡಳಿಯಲ್ಲಿ ಕಟೀಲ್​ ಕಾಮೆಡಿಯನ್​ ಇದ್ದಂತೆ -ಸಿದ್ಧರಾಮಯ್ಯ !

ನಿನ್ನೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ನಳಿನ್ ಕುಮಾರ್ ಕಟೀಲ್, ಡಿ.ಕೆ.ಶಿವಕುಮಾರ್ ಅರೇಸ್ಟ್ ಆಗೋದಿಕ್ಕೆ ಸಿದ್ಧರಾಮಯ್ಯನವರೇ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಕಟೀಲ್ ಅವರಿಗೆ ಟಾಂಗ್ ಕೊಟ್ಟದ್ದಾರೆ.
ಬಿಎಸ್​ವೈ ವಿರುದ್ಧ ದ್ವೇಷ ರಾಜಕಾರಣದ ಆರೋಪ ಮಾಡಿದ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ನಾಟಕ ಮಂಡಳಿಗೆ ಕಾಮಿಡಿಯನ್​ ಅಗತ್ಯವಿತ್ತು ಅದಕ್ಕಾಗಿ ನಳಿನ್ ಕುಮಾರ್ ಕಟೀಲ್​ ರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕೇವಲ ವಾಗ್ದಾಳಿ ಮಾತ್ರವಲ್ಲದೇ ಟ್ವೀಟರ್​ ನಲ್ಲೂ ನಳಿನ್ ಕುಮಾರ್ ಕಾಲೆಳೆದ ಮಾಜಿ ಸಿಎಂ ಸಿದ್ಧರಾಮಯ್ಯ, ನನಗೆ ಐಟಿ ಮತ್ತು ಇಡಿ ಮೇಲೆ ಅಷ್ಟೊಂದು ಹಿಡಿತ ಇರೋದು ನಿಜವಾದರೇ ನಿಮ್ಮ 56 ಇಂಚಿನ ಎದೆಯ ಪ್ರಧಾನಿ ಯಾಕೆ ಬೇಕು ರಿಸೈನ್ ಮಾಡಿ ಹೋಗಲು ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಟೀಲ್​ಗೆ ಏನು ಗೊತ್ತಿಲ್ಲ. ಬಿಜೆಪಿಯ ನಾಟಕ ಮಂಡಳಿಯಲ್ಲಿ ಕಟೀಲ್​ ಕಾಮೆಡಿಯನ್​ ಇದ್ದಂತೆ. ಬಿಜೆಪಿಯವರೇ ಅವರನ್ನು ಸೀರಿಯಸ್​ ಆಗಿ ತಗೋಳ್ತಿಲ್ಲ. ಅದಕ್ಕಾಗಿಯೇ ನಳಿನ್ ಕುಮಾರ್ ಈ ರೀತಿಯಲ್ಲ ಮಾತನಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !