ಪಾ'ಕ್ ನಲ್ಲಿ ಹಾಲಿನ ಬೆಲೆ ಗಗನಕ್ಕೆ, ಒಂದು ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ ?

ಮೊಹರಂ ಹಬ್ಬದ ವಿಶೇಷ ಆಗಿರುವುದರಿಂದ ಹಾಲಿನ ಬೆಲೆ ಗಗನಕ್ಕೆ ಏರಿದೆ. ಸಿಂಧ್ ಪ್ರಾಂತ್ಯದಲ್ಲೇ ಹಾಲಿನ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿತ್ತೆನ್ನಲಾಗಿದೆ. ಕರಾಚಿ ನಗರದ ಹಲವೆಡೆ ಒಂದು ಲೀಟರ್ ಹಾಲು 120-140 ರೂಪಾಯಿಗೆ ಮಾರಾಟವಾಗಿದೆಯಂತೆ. ಪಾಕ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 113 ರೂಪಾಯಿ (ಸುಮಾರು 51 ಭಾರತೀಯ ರೂ) ಮತ್ತು ಡೀಸೆಲ್ ಬೆಲೆ 91 ರೂಪಾಯಿ ಅಂದರೆ ಭಾರತದ ೪೧ ರುಪಾಯಿಗೆ ಸಮ.

ಮೊಹರಂ ಹಬ್ಬದಂದು ಹಾಲಿಗೆ ವಿಪರೀತ ಬೇಡಿಕೆ ಇರುತ್ತದೆ. ಭಾರತದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ರಸ್ತೆ ರಸ್ತೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಕೊಡುವಂತೆ ಮೊಹರಂ ಹಬ್ಬದಂದು ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಹಲವು ಕಡೆ ಹಾಲು, ಪಾನಕ, ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಕರಾಚಿಯಲ್ಲಿ ಈ ಬಾರಿ ಅತೀ ಹೆಚ್ಚು ಸ್ಥಳಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತೆನ್ನಲಾಗಿದೆ. ಹೀಗಾಗಿ, ಹಾಲಿಗೆ ವಿಪರೀತ ಬೇಡಿಕೆ ಬಂದು ಬೆಲೆ ಗಗನಕ್ಕೇರುವಂತಾಯಿತು ಎಂದು ಅಲ್ಲಿಯ ಅಧಿಕಾರಿಗಳು ಹೇಳುತ್ತಾರೆ.

ಪಾಕ್ ನಲ್ಲಿ ಮಾಮೂಲಿಯ ದಿನಗಳಲ್ಲಿ ಹಾಲಿನ ಬೆಲೆ ಲೀಟರ್​ಗೆ 94 ರೂ ಇದೆ. ಭಾರತೀಯ ರೂಪಾಯಿ ಪ್ರಕಾರ ಅದರ ಬೆಲೆ 43 ರೂ ಇರುತ್ತದೆ.

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !