ದೇಶದಲ್ಲೇ ವಿನೂತನ ಮಾದರಿ ಆಂಧ್ರ ಟ್ರಾಫಿಕ್ ಪೊಲೀಸರು - ನಮ್ಮ ರಾಜ್ಯದ ಪೊಲೀಸರು ಈ ಕೆಲಸ ಮಾಡುವುದು ಯಾವಾಗ?

ಹೊಸ ವಾಹನ ಕಾಯಿದೆ ಜಾರಿಗೆ ಬಂದಮೇಲೆ ಸಾಮಾನ್ಯ ಜನಗಳು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ದಂಡ ಕಟ್ಟುವುದಕ್ಕೆ ಹರಸಾಹಸ ಪಡಬೇಕಾಗಿದೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಕಮಿಷನರ್ ಆದ ರವಿ ಚಣ್ಣನವರ್ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು, ಇದು ವೈರಲ್ ಆಗಿತ್ತು. ಅವರು ಹೇಳಿದಂತೆ ಸವಾರರಿಗೆ ಒಂದು ಚಾನ್ಸ್ ಕೊಡಬೇಕು, ಮೊದಲ ಬಾರಿ ಉಲ್ಲಂಘನೆ ಮಾಡಿದರೆ ಹೆಲ್ಮೆಟ್ ಇಲ್ಲದಿದ್ದರೆ ಹೆಲ್ಮೆಟ್ ಕೊಡುವುದು ಅಥವಾ DL ಇಲ್ಲದಿದ್ದರೆ ಆದಷ್ಟು ಬೇಗ DL ಮಾಡಿಸಿಕೊಡುವುದು, ಇನ್ಶೂರೆನ್ಸ್ ಇಲ್ಲದಿದ್ದರೆ ಸ್ಥಳದಲ್ಲೇ ಇನ್ಶೂರೆನ್ಸ್ ಮಾಡಿಸಿಕೊಡುವ ಕೆಲಸವನ್ನು ಪೊಲೀಸರು ಮಾಡಿದರೆ ಎರಡನೇ ಬಾರಿ ಉಲ್ಲಂಘನೆ ಮಾಡಿದರೆ ದಂಡ ಹಾಕಿದರೆ ಏನು ತೊಂದರೆಯಿಲ್ಲ ಇದರಿಂದ ಉಲ್ಲಂಘನೆ ಕಡಿಮೆಯಾಗುತ್ತದೆ.

ರವಿ ಚೆನ್ನನವರ್ ಹೇಳಿದ ಕೆಲಸವನ್ನು ಈಗಾಗಲೇ ಆಂಧ್ರ ಪೊಲೀಸರು ಪ್ರಾರಂಭ ಮಾಡಿದ್ದಾರೆ ಮತ್ತು ಅಲ್ಲಿನ ಜನಗಳು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ದಂಡವನ್ನು ಮಾತ್ರವಲ್ಲ ಸಮಾಜಮುಖಿ ಕಾರ್ಯದಲ್ಲೂ ತೊಡಗಿದ್ದೇವೆ ಎಂಬ ಸಂದೇಶ ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಪೊಲೀಸರ ಜನಸ್ನೇಹಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಪೊಲೀಸರ ಕುರಿತು ಜನರಲ್ಲಿ ತಪ್ಪು ಭಾವನೆ ವ್ಯಕ್ತವಾಗುತ್ತಿದೆ. ದುಬಾರಿ ಹಣ ಕಿತ್ತು ಜನರಿಂದ ಲೂಟಿ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಆದರೆ ಸಂಚಾರಿ ನಿಯಮ ಉಲ್ಲಂಘನೆಯಿಂದಾಗಿ ಅವರಿಗೇ ತೊಂದರೆ. ದಂಡ ಮಾತ್ರವಲ್ಲದೇ ತಮ್ಮ ಸುರಕ್ಷತೆ ಕುರಿತು ಕೂಡ ಅವರು ಆಲೋಚಿಸಬೇಕು’ ಎಂದು ಹೈದರಾಬಾದ್ ಸಂಚಾರಿ ಪೊಲೀಸ್ ಉಪ ಆಯುಕ್ತರಾದ ದಿವ್ಯ ಚರಣ್ ರಾವ್ ತಿಳಿಸಿದ್ದಾರೆ. ಇಷ್ಟು ದಿನ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದ ಸವಾರರಿಗೆ ದುಬಾರಿ ದಂಡ ವಿಧಿಸುತ್ತಿದ್ದರು. ಆದರೀಗ ಹೆಲ್ಮೆಟ್ ಇಲ್ಲದೇ ಚಲಾಯಿಸುತ್ತಿದ್ದ ಸವಾರರಿಗೆ ಸ್ಥಳದಲ್ಲೇ ದಂಡ ವಸೂಲಿ ಮಾಡಿ ಅದೇ ದಂಡದಿಂದ ಹೆಲ್ಮೆಟ್ ಖರೀದಿಸಿ ಸವಾರರಿಗೆ ನೀಡುತ್ತಿದ್ದಾರೆ. ಅದೇ ರೀತಿ ಸೂಕ್ತ ದಾಖಲೆಗಳಲ್ಲಿದ ವಾಹನ ಸವಾರರಿಂದ ವಸೂಲಾಗುವ ದಂಡದಿಂದ ಸೂಕ್ತ ದಾಖಲೆಗಳನ್ನು ಪಡೆಯಲು ಸಹಕರಿಸುತ್ತಿದ್ದಾರೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?