1611 ಕೋಟಿ ಮಾತ್ರ ರೈತ ಸಾಲ ಮನ್ನಾ ಮಾಡಿರುವುದು, 48 ಸಾವಿರ ಕೋಟಿ ಅಂತ ಸುಳ್ಳು ಹೇಳಿದ್ರಾ ಕುಮಾರಸ್ವಾಮಿ ? ರಾಜ್ಯಪಾಲರ ಭಾಷಣದಲ್ಲಿ ಸತ್ಯ ಬಯಲು!

ನಾನು ಮುಖ್ಯಮಂತ್ರಿಯಾದರೆ 24 ಗಂಟೆಗಳಲ್ಲಿ 48 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು ಮತ್ತು ಇಲ್ಲಿಯವರೆಗೂ ಎಲ್ಲ ರೈತರ ಸಾಲ ಮನ್ನಾ ಮಾಡಿದ್ದೇವೆ ಮತ್ತು ಹಣ ಬಿಡುಗಡೆ ಮಾಡಿದ್ದೇವೆ ಎಂದು ಕುಮಾರಸ್ವಾಮಿಯವರು ಹಲವು ಬಾರಿ ಹೇಳಿದ್ದರು ಆದರೆ ಇಲ್ಲಿಯವರಿಗೆ 1611 ಕೋಟಿಯಷ್ಟೇ ಮಾತ್ರ ಮನ್ನಾ ಆಗಿರುವುದು ಎಂದು ರಾಜ್ಯಪಾಲರ ಭಾಷಣದಲ್ಲಿ ಸತ್ಯ ಬಯಲಾಗಿದೆ. 44 ಲಕ್ಷ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ಇಲ್ಲಿಯವರೆಗೆ 3 .28 ಲಕ್ಷ ರೈತರ ಸಾಲ ಮನ್ನಾ ಮಾಡಲು ಹಣ ಬಿಡುಗಡೆ ಮಾಡಿದ್ದಾರಂತೆ.

ಸಹಕಾರ ಸಂಘಗಳಲ್ಲಿ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಬಾಕಿ ಇರುವ ಎಲ್ಲ ಅರ್ಹ ಬೆಳೆ ಸಾಲಗಳನ್ನು ಮನ್ನಾ ಮಾಡುವ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಈ ವರ್ಷದ ಜ. 31ರವರೆಗೆ 3.28 ಲಕ್ಷ ರೈತರ ಬೆಳೆ ಸಾಲಮನ್ನಾಕ್ಕಾಗಿ 1611 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲ ವಜುಬಾಯಿ ರೂಢಾವಾಲಾ ಅವರು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕರು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದಾರೆ. ಕುಮಾರಸ್ವಾಮಿಯವರು ಹೇಳಿದ್ದು ಒಂದು ಮತ್ತು ಮಾಡಿದ್ದೂ ಇನ್ನೊಂದು ಹಾಗು ಸುಳ್ಳು ವರದಿಯನ್ನು ಕೊಟ್ಟು ಭಾಷಣ ಮಾಡಬೇಡಿ ಎಂದು ವಿಧಾನ ಸಭೆಯಲ್ಲಿ ಗಲಾಟೆ ಮಾಡಿದ್ದಾರೆ.

ರಾಜ್ಯ ವಿಧಾನಮಂಡಲದ ಉಭಯ ಸದನಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು, ಸರ್ಕಾರ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ದೀರ್ಘಾವತಿ ಕ್ರಿಯಾಯೋಜನೆಯ ಅಗತ್ಯವನ್ನು ಮನಗಂಡಿದೆ ಎಂದರು. ಇದಕ್ಕಾಗಿ ಕೃಷಿ ಪದ್ಧತಿಗಳಲ್ಲಿ ಇನ್ನು ಹೆಚ್ಚಿನ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ ಎಂದು ತಿಳಿಸಿದರು.

ಕಳೆದ ವರ್ಷದ ಮುಂಗಾರು ಅವಧಿಯಲ್ಲಿ 100 ತಾಲ್ಲೂಕುಗಳು, ಹಿಂಗಾರು ಅವಧಿಯಲ್ಲಿ 156 ತಾಲ್ಲೂಕುಗಳು ಬರಪೀಡಿತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಸಿರು ಮೇವನ್ನು ಬೆಳೆಸಲು ರೈತರಿಗೆ 8.11 ಲಕ್ಷ ಮೇವು ಮಿನಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಇದರಿಂದ 30 ಲಕ್ಷ ಟನ್‌ಗಳಷ್ಟು ಹಸಿರು ಮೇವು ಉತ್ಪಾದನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ದೇಶ'ದಲ್ಲಿ ಪ್ರಜಾ'ಪ್ರಭುತ್ವ ಅ'ಪಾಯದಲ್ಲಿದೆ - ದೇ'ವೇಗೌಡ..??

ಕಾಂ'ಗ್ರೆಸ್ ನ ಮತ್ತೊಂದು ಬೃ'ಹ'ತ್ ಹ'ಗಹ'ರಣ ಬ'ಯಲಿಗೆ - ಈ ಇ'ಬ್ಬರು ಪ್ರ'ಭಾ'ವಿ ನಾ'ಯಕರಿಗೆ ಸಂ'ಕ'ಷ್ಟ ? ಯಾ'ರು ಗೊತ್ತಾ !

ಮೋದಿ ಒಬ್ಬ ತು'ಘಲಕ್, ಬಿ.ಎಸ್.ವೈ ಒಬ್ಬ ನಾ'ಲಾಯಕ್ - ಟ್ವೀಟ್ ಮಾಡಿ ಪೇ'ಚಿಗೆ ಸಿ'ಲುಕಿದ ಕಾಂಗ್ರೇಸ್ ..??

ಫೋನ್​ ಟ್ಯಾ'ಪಿಂಗ್​ ಪ್ರ'ಕರಣದಲ್ಲಿ ಎಚ್​ಡಿಕೆ ಮತ್ತು ಡಿಕೆಶಿ ಸಿ'ಬಿ'ಐ ಬ'ಲೆಯಲ್ಲಿ ?